About ಪ್ರಕವಿ

ಕವನ ಬರೆದಾಗ ಪ್ರಕವಿ, ಲೇಖನ ಬರೆದಾಗ ಪ್ರಲೇಖ! ಚಿತ್ರ ತೆಗೆಯುವಾಗ ಪ್ರಚಿತ್ರ! ಹಾಗೂ, ನಿಮ್ಮನ್ನು ನಗಿಸುವಾಗ ಪ್ರಹಾಸ! Hi. I am Pradeep. Do not ask me who am I. For, I am just a mere human who likes to create, to capture the beauty and essence of nature, to savour and share the merits of humour, to write on what seems worthwhile, or to exercise my poetic license.

ಚಿತ್ರ – ಸಮಯದ ಒಂದು ತುಣುಕು

ಚಿತ್ರ - ಸಮಯದ ಒಂದು ತುಣುಕು

ಚಿತ್ರ - ಸಮಯದ ಒಂದು ತುಣುಕು

ಚಿತ್ರವೊಂದು ಸಾವಿರ ಮಾತುಗಳನ್ನಾಡುವುದೆಂದು ಹೇಳುತ್ತಾರೆ. ಆದರೆ ಚಿತ್ರವೊಂದು ಅದಕ್ಕಿಂತ ಮಿಗಿಲಾಗಿದೆ. ಹೇಗೆ ಸಂಗೀತಕ್ಕೆ ಮನ ತಣಿಸುವ ಶಕ್ತಿಯಿದೆಯೋ, ಅದೇ ರೀತಿ ಚಿತ್ರಗಳೂ ಸಹ. ಚಿತ್ರಗಳು ಸಮಯದ ಒಂದು ತುಣುಕು. ನಾವು ಎಂದೆಂದಿಗೂ ಆನಂದಿಸಬಹುದಾದ ಘಳಿಗೆಯ ಒಂದು ನೋಟ.

ಚಿತ್ರದಲ್ಲಿರುವ ವ್ಯಕ್ತಿ, ದೃಷ್ಯ, ಅಥವಾ ಯಾವುದೇ ಒಂದು ವಸ್ತು ನಿಜ ಜೀವನದಲ್ಲಿ ಬದಲಾಗಬಹುದು, ಇನ್ನಿಲ್ಲದೆಯೂ ಇರಬಹುದು. ಆದರೆ ಆ ವಸ್ತುವು ತನ್ನ ಚಿತ್ರದಲ್ಲಿ ಅದನ್ನು ತೆಗೆದ ಘಳಿಗೆಯಲ್ಲಿದ್ದಂತೆ ಎಂದೆಂದಿಗೂ ಶಾಶ್ವತವಾಗಿ ಕಂಗೊಳಿಸುವಿದು. ಚಿತ್ರದಲ್ಲಿರುವ ದೃಷ್ಯಕ್ಕೆ ಆ ಚಿತ್ರವಿರುವವರೆಗೂ ಸಾವಿಲ್ಲ.

ಚಟ್ಟಿಯಲ್ಲಿ ನಿದ್ರಿಸುತ್ತಿರುವ ನಮ್ಮ ಬೆಕ್ಕು

ಚಟ್ಟಿಯಲ್ಲಿ ನಿದ್ರಿಸುತ್ತಿರುವ ನಮ್ಮ ಬೆಕ್ಕು

ಒಂದು ಒಳ್ಳೆಯ ಚಿತ್ರವು ಒಳ್ಳೆಯ ಸಂಗೀತದಂತೆ ಮನಸ್ಸಿಗೆ ಆನಂದವನ್ನೂ, ಸಂತಸವನ್ನೂ ತರುವುದು. ಓಂದು ರೀತಿಯಲ್ಲಿ, ಚಿತ್ರಗಳು ಕಂಗಳಿಗೆ ಸಂಗೀತವೆಂದರೆ ತಪ್ಪಾಗಲಾರದು. ತಿಂಗಳು, ವರ್ಷಗಳ ನಂತರ ಒಂದು ಚಿತ್ರವನ್ನು ನೋಡಿದಾಕ್ಷಣ ಕಳೆದು ಹೋದ ಕ್ಷಣಗಳ ನೆನಪು ತರುವುದು ಹಾಗೂ ಸಂತಸ ಕೊಡುವುದು. ಆ ಚಿತ್ರದಲ್ಲಿ ನಿಮ್ಮ ಆಪ್ತರೇ ಇರಬಹುದು, ನೀವೇ ಇರಬಹುದು ಅಥವಾ ಜಾತ್ರೆಯೊಂದರ ಜನಜಂಗುಳಿಯೇ ಇರಬಹುದು. ಆ ಚಿತ್ರವು ನಿಮ್ಮ ಮನಸನ್ನು  ಅದನ್ನು ಸೆರೆಹಿಡಿದ ಕ್ಷಣಕ್ಕೊಯ್ದು, ಸಂಬಂಧಪಟ್ಟ ವಿಷಯಗಳ ನೆನಪಿನ ಕಲೆತವನ್ನು ತೆರೆದಿಡುವುದೆಂದರೆ ತಪ್ಪಾಗದು. ಯಾರೂ ಇಲ್ಲದಿರುವ ಒಂದು ಸಂಜೆಯ ಬರೀ ನಿಸರ್ಗದ ಚಿತ್ರವೂ ಅದನ್ನು ನೋಡಿದಾಕ್ಷಣ, ನಿಸರ್ಗವು ಕರುಣಿಸಿದ ಆ ಸಂಜೆಯ ವೈಭವವನ್ನು, ಆನಂದವನ್ನು ಮತ್ತೆ ತರುವುದು.

ನೀವು ಸೆರೆಹಿಡಿದ ನಿಮ್ಮ ಕ್ಷಣಗಳ ಚಿತ್ರಗಳು, ಹಾಗೂ ಸುಮ್ಮನೆ ಮೋಜಿಗೆ ತೆಗೆದ ಚಿತ್ರಗಳನ್ನು ನೀವು ಮಾತ್ರವಲ್ಲದೆ ಮುಂದಿನ ಪೀಳಿಗೆಯೂ ಆನಂದಿಸುವರು.

ಪ್ರಲೇಖ
ನನ್ನ ಚಿತ್ರಗಳನ್ನು ನೋಡಲು ಪ್ರಚಿತ್ರಕ್ಕೆ ಭೇಟಿ ನೀಡಿ.

ಚಿತ್ರ ಕೃಪೆ:
Camera_Icon.png By Mazenl77 (FindIcons) [CC-BY-3.0-2.5-2.0-1.0], via Wikimedia Commons

ರೈಲು ವಿಸ್ತರಣೆ : ಮಂಗಳೂರಿನ ರೈಲು ಪ್ರಸಂಗ

ಮಂಗಳೂರಿನ ರೈಲು ಪ್ರಸಂಗ

ರೈಲು ವಿಸ್ತರಣೆ


ಮಂಗಳೂರು-ಮುಂಬೈ ನಡುವಿನ ಮಂಗಳೂರು ಜಂಕ್ಷನ್-ಛತ್ರಪತಿ ಶಿವಾಜಿ ಟರ್ಮಿನಸ್(CST) ರೈಲು ಈಗ “ಮುಂಬೈ ಎಕ್ಸ್ ಪ್ರೆಸ್” (12133/34) ಎಂದು ಮರುನಾಮಕರಣಗೊಂಡಿದೆ. ಉದಯವಾಣಿಯ ವರದಿಯ ಪ್ರಕಾರ, ಇದರ ಹಿಂದೆ ಈ ರೈಲನ್ನು ಎರ್ನಾಕುಲಂಗೆ ವಿಸ್ತರಿಸುವ ಹುನ್ನಾರ ಕಂಡುಬಂದಿದೆ [೧]. ಬಹುಜನರ ಬೇಡಿಕೆಯ ಮೇರೆಗೆ ಪ್ರಾರಂಭಿಸಿದ್ದ ಈ ಎಕ್ಸ್ ಪ್ರೆಸ್ ರೈಲನ್ನು ಮುಂಬೈನ CST ಹಾಗೂ ಮಂಗಳೂರು ಜಂಕ್ಷನ್ ನಡುವೆ ಮಾತ್ರ ಓಡಿಸುತ್ತಿದ್ದರು. ಇದು ಮಂಗಳೂರು ಸಿಟಿ ಟರ್ಮಿನಲ್ಲಿಗೆ ಹೋಗುತ್ತಿರಲಿಲ್ಲ. ಕೇರಳಕ್ಕೆ ವಿಸ್ತರಿಸುವ ಅಂದಾಜು ಪ್ರಾರಂಭದಿಂದಲೇ ಇತ್ತೆಂದು ತೋರುತ್ತದೆ [೧], ಏಕೆಂದರೆ, ಕೇರಳದ ಕಡೆ ಮಂಗಳೂರಾಗಿ ಹಾದು ಹೋಗುವ ಎಲ್ಲಾ ರೈಲುಗಳು ಮಂಗಳೂರು ಜಂಕ್ಷನ್ ಆಗಿಯೇ ಹೋಗಬೇಕು. ಟರ್ಮಿನಲ್ಲಿಗೆ ಹೋದರೆ ಅಲ್ಲಿ ಎಂಜಿನ್ ದಿಕ್ಕು ಬದಲಿಸಿ ತಿರುಗಿ ಬರಬೇಕು. ಇದಾದಲ್ಲಿ ಇನ್ನೊಂದು ಮಂಗಳೂರಿಗಂತಿದ್ದ ರೈಲು ಕೇರಳಕ್ಕೆ ವಿಸ್ತರಣೆಗೊಳ್ಳುವುದು. ಈ ಹಿಂದೆ ಬೆಂಗಳೂರು-ಮಂಗಳೂರು ನಡುವೆ ಇದ್ದ “ಯಶವಂತಪುರ ಎಕ್ಸ್ ಪ್ರೆಸ್” ಕೇರಳದ ಕಣ್ಣೂರಿಗೆ ವಿಸ್ತರಿಸಲ್ಪಟ್ಟಿತ್ತು.

ಮೀಟರ್ ಗೇಜಿನಿಂದ ಬ್ರಾಡ್ ಗೇಜಿನ ಪರಿವರ್ತನೆಗೆ ಹತ್ತು ವರುಷಗಳೇ ಬೇಕಾದವು. ಅದರಲ್ಲಿ ಸಕಲೇಷಪುರ-ಮಂಗಳೂರು ಜಂಕ್ಷನ್ನಿನ ಕಾಮಗಾರಿಗೇ ಹೆಚ್ಚು ವರುಷಗಳು ಬೇಕಾದವು. ೧೯೭೯ರಲ್ಲೇ ಶುರುವಾದ ಮೀಟರ್ ಗೇಜ್ ಕಾಲದಲ್ಲಿ ಮಂಗಳೂರಿಂದ ಬೆಂಗಳೂರಿಗೆ, ನನಗೆ ನೆನಪಿದ್ದಂತೆ ಮೂರು ರೈಲುಗಳಾದರೂ ಇದ್ದವು. ನವೆಂಬರ್ ೨೦೦೫ರಲ್ಲಿ ಮುಗಿದ ಗೇಜ್ ಪರಿವರ್ತನೆ ಕಾರ್ಯದ ಬಳಿಕ ಗೂಡ್ಸ್ ರೈಲುಗಳು ಓಡಾಡುತ್ತಿದವು. ಇದಾಗಿ ಎರಡು ವರುಷದ ವರೆಗೆ ನೆಪಗಳನ್ನೋಡ್ಡಿದ ಬಳಿಕ, ರೈಲ್ವೇಯವರು ಅಂತೂ ಡಿಸೆಂಬರ್ ೨೦೦೭ರಲ್ಲಿ ಯಶವಂತಪುರ-ಬೆಂಗಳೂರು ರೈಲನ್ನು (ಯಶವಂತಪುರ ಎಕ್ಸ್ ಪ್ರೆಸ್) ಪ್ರಾರಂಭಿಸಿದರು. ಪ್ರತಿ ರಾತ್ರಿ ಮಂಗಳೂರು ಹಾಗೂ ಬೆಂಗಳೂರಿನಿಂದಿದ್ದ ಈ ರೈಲು ಮೈಸೂರು ಮಾರ್ಗವಾಗಿ ಹೋಗುತ್ತಿತ್ತು (~೧೨ ತಾಸಿನ ಪ್ರಯಾಣ). ಮೊದಲಿನ ಮೀಟರ್ ಗೇಜ್ ಬೆಂಗಳೂರು ರೈಲು ತುಮಕೂರು-ಅರಸೀಕೆರೆ ಮೇಲೆ ಓಡುತ್ತಿತ್ತು (~೧೦ ತಾಸಿನ ಪ್ರಯಾಣ). ಆದರೆ, ಡಿಸೆಂಬರ್ ೨೦೦೯ರಲ್ಲಿ ಹತ್ತು ವರುಷ ತಾಳ್ಮೆಯಿಂದ ಕಾದ ಮಂಗಳೂರಿಗೆ ಪ್ರಾರಂಭವಾಗಿ ಎರಡೇ ವರುಷದಲ್ಲಿ ಈ ರೈಲು ಕೇರಳದ ಕಣ್ಣೂರಿಗೆ ವಿಸ್ತರಣೆಯಾಗುವ ಉಡುಗೊರೆ ದೊರಕಿತು. ಎರಡು ತಿಂಗಳ ಹಿಂದೆ, ಎರಡು ದಿನಕ್ಕೊಮ್ಮೆ ವಾರಕ್ಕೆ ಮೂರು ಸಲ ಓಡುವ ಹಗಲು ರೈಲು ಜನರ ಒತ್ತಾಯದ ಮೇರೆಗೆ ಕಾರವಾರಕ್ಕೆ ಇತ್ತೀಚೆಗೆ (ಪುಣ್ಯಕ್ಕೆ ನಮ್ಮ ಕರಾವಳಿಗೇ) ವಿಸ್ತರಣೆಗೊಂಡಿದೆ[೨]. ಈ ರೈಲು ತುಮಕೂರು-ಅರಸೀಕೆರೆ ಮಾರ್ಗವಾಗಿ ಓಡುವುದು. ಮಂಗಳೂರಿನಿಂದ ಬೆಂಗಳೂರಿನೆಡೆಗೆ ಓಡುವುದು ಸಧ್ಯಕ್ಕೆ ಈ ಎರಡೇ ರೈಲುಗಳು.

ಕರ್ನಾಟಕದ ಬಂದರು ನಗರಿ ಮಂಗಳೂರು ತನ್ನ ರಾಜ್ಯದ ರಾಜಧಾನಿಗೆ ರೈಲಿನ ಮೂಲಕ ಈ ಬಗೆಯ ಸಂಪರ್ಕವಿರುವುದು ವಿಪರ್ಯಾಸ. ಈ ಎರಡು ನಗರಗಳ ನಡುವಿನ ಜನಸಂಚಾರ ಹೆಚ್ಚಿಗೆ ಇದ್ದು, ರೈಲ್ವೇಯವರಿಗೆ ಸರಿಯಾದ ರೈಲು ಸಂಪರ್ಕ ಸಾಧಿಸಿದಲ್ಲಿ ನಷ್ಟವಲ್ಲ, ಲಾಭವೇ. ಆದರೂ ಹಾಗೆ ಯಾಕಾಗುತ್ತಿಲ್ಲವೆಂಬುದೇ ಯಕ್ಷ ಪ್ರಶ್ನೆಯಾಗಿದೆ. ಇನ್ನೊಂದು ವಿಪರ್ಯಾಸವೇನೆಂದರೆ, ಮಂಗಳೂರಿನಿಂದ ಚೆನ್ನೈಗೆ ಇರುವ “ಚೆನ್ನೈ ಮೇಲ್” ಈಗಲೂ ಕೇರಳವಾಗಿ ತಮಿಳು ನಾಡಿನ ಕೊಯಮುತ್ತೂರಿನ ಮೂಲಕ ತುಂಬಾ ಸುತ್ತಾಗಿ ಹಾದು ಹೋಗುವುದು. ಈ ದಾರಿಯಲ್ಲಿ ರೈಲಿನಲ್ಲಿ ಚೆನ್ನೈಗೆ ಹೋದರೆ ಮಂಗಳೂರಿಂದ ಮುಂಬೈಗೆ ಹೋದಕ್ಕಿಂತ ಹೆಚ್ಚು ಹೊತ್ತು ಬೇಕಾಗುವುದು! [೩] [ಈ ಸ್ವಾರಸ್ಯಕರ ಬ್ಲಾಗ್ ಪೋಸ್ಟ್ ನೋಡಿ. ಆಂಗ್ಲ ಭಾಷೆಯಲ್ಲಿದೆ.] ಮಂಗಳೂರಿಂದ ಚೆನ್ನೈಗೆ ಹೋಗಲು ಈ ರೈಲಿನ ಪ್ರಯೋಜನವಾದರೂ ಏನು? ಇದರಿಂದ ಯಾರಿಗೆ ನಿಜವಾದ ಪ್ರಯೋಜನವೆಂದು ಬಿಡಿಸಿ ಹೇಳಬೇಕಾಗಿಲ್ಲ ತಾನೆ. ಈ ರೈಲು ಈಗ ಬೆಂಗಳೂರಾಗಿ ಓಡಿದರೆ ಅರ್ಥವಿರುತ್ತದೆ. ಆದರೆ, ಒಂದು ಪಕ್ಷ ಹಾಗಾದಲ್ಲಿ ಈ ರೈಲೂ ಕೇರಳದ ಯಾವುದೋ ಊರಿಗೆ ವಿಸ್ತರಣೆಗೊಂಡರೆ ಆಶ್ಚರ್ಯವೇನಿಲ್ಲ! ಕರಾವಳಿ ಕರ್ನಾಟಕದಿಂದ ರಾಜ್ಯದ ಇತರ ಭಾಗಗಳಿಗೆ ರೈಲು ಸಂಪರ್ಕ ಇಂದಿಗೂ ಸರಿಯಾಗಿಲ್ಲ. ಕರ್ನಾಟಕದ ರೈಲ್ವೇ ನಕಾಷೆಯ ಹಾಗೂ ವೇಳಾಪಟ್ಟಿಯ ನೋಡಿದರೆ ರಾಜ್ಯದಲ್ಲಿನ ರೈಲಿನ ವ್ಯವಸ್ಥೆ ಹೇಗಿದೆ ಎಂದು ಎಂಥವನಿಗೂ ಗೋಚರಿಸುವುದು. ಮಂಗಳೂರು ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣವು ಈಗಲೂ ದಕ್ಷಿಣ ರೈಲ್ವೆಯ ಪಾಲ್ಘಾಟ್ ವಲಯದಲ್ಲಿದೆ. ಬಹುಕಾಲಿಕ ಆಗ್ರಹದ ಬಳಿಕವೂ ಈ ನಿಲ್ದಾಣಗಳು ದಕ್ಷಿಣ-ಮಧ್ಯ ರೈಲ್ವೆಯ ಮೈಸೂರು ವಲಯಕ್ಕೆ ಹಸ್ತಾಂತರಗೊಂಡಿಲ್ಲ.

ಈಗ ಕೇರಳಕ್ಕೆ ವಿಸ್ತರಣೆಗೊಳ್ಳಬಹುದಾದ “ಮುಂಬೈ ಎಕ್ಸ್ ಪ್ರೆಸ್” ಅನ್ನು ಹೊರತುಪಡಿಸಿ ಮಂಗಳೂರಿನಿಂದಲೇ ಮುಂಬೈಗೆ ಹೊರಡುವ ರೈಲೆಂದರೆ ಮಂಗಳೂರು ಸಿಟಿ ಟರ್ಮಿನಲ್ಲಿನಿಂದ ಹೊರಡುವ “ಮತ್ಸಗಂಧಾ ಎಕ್ಸ್ ಪ್ರೆಸ್” ಮಾತ್ರ. ರಾಜ್ಯದಲ್ಲಿ ರೈಲಿನ ಬಗೆಗೆ ರಾಜ್ಯದ ನಾಯಕರ ದಿವ್ಯ ನಿರ್ಲಕ್ಷ್ಯ ಮುಂದುವರೆಯುತ್ತಾ ಕನ್ನಡ ಕರಾವಳಿಯು ಉತ್ತಮ ರೈಲು ಸೇವೆಯಿಂದ ಇಂದಿಗೂ ವಂಚಿತವಾಗಿದೆ.

ಪ್ರಲೇಖ

ಟಿಪ್ಪಣಿಗಳು:
[೧] ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ಈಗ ಮುಂಬಯಿ ಎಕ್ಸ್‌ಪ್ರೆಸ್‌:ಕೇರಳಕ್ಕೆ ವಿಸ್ತರಣೆಗೆ ಪೀಠಿಕೆ : Udayavani | Dec 25, 2011
[೨]The Hindu:Yeshwanthpur-Mangalore express extended to Karwar
[೩] Karthik’s Log : From Mangalore to Chennai

ಚಿತ್ರ ಕೃಪೆ:
[೧] Train-2.jpg is a cropped image derived from 7032 HYB_Jambrung_Indian_Railways.jpg By HarshWCAM3 (IMG_0304Uploaded by oxyman) [CC-BY-SA-2.0], via Wikimedia Commons

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ಕಣಜ | ಅಂತರಜಾಲ ಕನ್ನಡ ಜ್ಞಾನಕೋಶ

ಇತ್ತೀಚೆಗೆ  “ಕಣಜ” ಎಂಬ ಅಂತರ್ಜಾಲ ತಾಣದ ಬಗ್ಗೆ ತಿಳಿದು ಬಂತು. ಇದನ್ನು ನೋಡಲು ಹೋದಾಗ ಇದು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಯೋಜನೆಯು ರೂಪಿಸಿ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿಯು (ಐಐಐಟಿ-ಬಿ) ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶ ಎಂದು ತಿಳಿದುಬಂತು.

ಕನ್ನಡದಲ್ಲಿ ಇರುವ ಎಲ್ಲ ಬಗೆಯ ಸಾಹಿತ್ಯವನ್ನೂ ಕಲಿಕೆಗಾಗಿ ಸಾರ್ವಜನಿಕರಿಗೆ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಅಲ್ಲದೇ, ‘ಕಣಜದಲ್ಲಿ ನಾವು-ನೀವೂ ಸಹ ಬರೆಯಬಹುದು . ಕನ್ನಡ ಭಾಷೆಯಲ್ಲಿ ಯಾವುದೇ ಮಾಹಿತಿಗೆ ಏಕೈಕ ಮೂಲವಾಗುವ, ವಿವಿಧ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಮಾಹಿತಿಗಳನ್ನು ಪಡೆದು ಅವುಗಳನ್ನು ಸಾರ್ವಜನಿಕ ಬಳಕೆಗಾಗಿ ಕನ್ನಡ ಭಾಷೆಯಲ್ಲಿ, ವಿದ್ಯುನ್ಮಾನ ರೂಪದಲ್ಲಿ, ವಿಶ್ವವ್ಯಾಪಿ ಜಾಲತಾಣದಲ್ಲಿ (www.kanaja.in) ಪ್ರಕಟಿಸುವುದು “ಕಣಜ” ದ ಉದ್ದೇಶವಾಗಿದೆ. ಮಾಹಿತಿಗಳು ಆದಷ್ಟೂ ಅಧಿಕೃತವೂ, ಖಚಿತವೂ, ಸಂಪೂರ್ಣವೂ, ಗುಣಮಟ್ಟದ್ದೂ ಆಗಿರುವಂತೆ ತಜ್ಞರ ನೆರವನ್ನು ಪಡೆದು ಎಲ್ಲ ಮಾಹಿತಿಗಳನ್ನೂ ಪರಾಮರ್ಶೆಗೆ ಒಳಪಡಿಸಿಯೇ ಪ್ರಕಟಿಸುವುದು. ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಒತ್ತಿರಿ ಹಾಗೂ, `ಕಣಜ’ ಜಾಲತಾಣದಲ್ಲಿ ಪ್ರತಿದಿನವೂ ಒಂದು ಹೊಸ ಲೇಖನವು ಪ್ರಕಟವಾಗುವುದು. ವಿವಿಧ ವಿಷಯತಜ್ಞ ಲೇಖಕರು ತಿಂಗಳಿಗೊಮ್ಮೆ ಕನ್ನಡಿಗರ ಅರಿವಿನ ವಿಸ್ತಾರಕ್ಕೆ ನೆರವಾಗುವ ಲೇಖನಗಳನ್ನಿಲ್ಲಿ ಬರೆಯುವರು. ಕನ್ನಡ ಭಾಷೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಕೃಷಿ, ರೈತರ ಅನುಭವ, ಕಲೆ, ಸಂಗೀತವೆಂಬಂತೆ ಹಲವಾರು ಅಂಕಣಗಳಿವೆ. ಕನ್ನಡ/ಆಂಗ್ಲದಲ್ಲಿ ಟೈಪ್ ಮಾಡುವ ಸೌಲಭ್ಯವೂ ಇದೆ (ಕಣಜದ ಪುಟಗಳಲ್ಲಿ ಬಲ ಮೇಲ್ಭಾಗದಲ್ಲಿ ಈ ಸೌಲಭ್ಯ ಕಾಣಿಸುವುದು). ಇದಲ್ಲದೇ, ಉಪಯುಕ್ತಕಾರಿ ಕನ್ನಡ ಶಬ್ದಕೋಶವನ್ನೂ ಹೊಂದಿದೆ.

ಒಂದು ವಿಪರ್ಯಾಸವೇನೆಂದರೆ, “ಕಣಜ” ಶಬ್ದಾರ್ಥದ ಶೋಧನೆಗೆ ಯಾವುದೇ ಫಲಿತಾಂಶ ಒದಗಲಿಲ್ಲ! ಮುಂದಿನ ದಿನಗಳಲ್ಲಿ ಶಬ್ದಕೋಶದ ಅಭಿವೃದ್ಧಿಯಾಗುವುದೆಂದು ಬಯಸುವೆ. ಕನ್ನಡವನ್ನು ಉಳಿಸುವ, ಹಾಗೂ ಅಂತರ್ಜಾಲ ಮಾಧ್ಯಮದ ಮೂಲಕ ಕನ್ನಡವ ಪಸರಿಸುವ ನಿಟ್ಟಿನಲ್ಲಿ ರೂಪಿಸಿದ ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಈ ಯೋಜನೆ ನಿಜಕ್ಕೂ ಸಂತಸದ ಸುದ್ದಿ. ಕನ್ನಡವನ್ನು ಉಳಿಸೋಣ, ಬೆಳೆಸೋಣ.

ನಾಯಿ ಹೆಗಲಿಗೆ, ಮಗು ಬೀದಿಗೆ… (via CAUTIOUSMIND)

ಥೂ.. ಈ ಥರಾ ಮನುಷ್ಯರೂ ಇರ್ತಾರಾ.. ಇವರಿಗೆ ಶತಮಾನದ ಅತಿ ದೊಡ್ಡ ಶ್ವಾನಪ್ರಿಯರೆಂಬ ಬಿರುದು ನೀಡಬೇಕು…

ನಾಯಿ ಹೆಗಲಿಗೆ, ಮಗು ಬೀದಿಗೆ... ಇಂದಿನ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ (ಕೆಪಿಎನ್) ನ ಪೋಟೋ… … Read More

via CAUTIOUSMIND

Quote for the Day

:: ಇಂದಿನ ಉಲ್ಲೇಖ ::

…………………………………………………………………………………
…………………………………………………………………………………’
…………………………………………………………………………………
…………………………………………………………………………………
…………………………………………………………………………………
…………………………………………………………………………………
          

.          

.          

.          

.          

.          

.          


” You have just been APRIL FOOLed by me!”
– Pralekha

” ನಿಮ್ಮನ್ನು ಈಗಷ್ಟೇ ಎಪ್ರಿಲ್ ಫೂಲ್ ಮಾಡಿದೆ!”

ಪ್ರಲೇಖ(Pralekha)

©2009 Pradeep Hegde. All rights reserved.